Tuesday, January 1, 2013

ಮಾವೋತೊ ನಕ್ಸಲ್


[ಈ ಲೇಖನವನ್ನು ನಾನು ಬರೆದದ್ದು ೧೯೯೦ರಲ್ಲಿಆಗ ಲಂಕೇಶ್ ಪತ್ರಿಕೆಯಲ್ಲಿ ಒಂದು ಪುಟ್ಟ ಟಿಪ್ಪಣಿ ಹಾಕಿ ಅವರು ಪ್ರಕಟಿಸಿದ್ದರು ಟಿಪ್ಪಣಿಯಲ್ಲಿ ನಕ್ಸಲ್ಗಳನ್ನುಸಮೀಪದಿಂದ ಕಂಡ ಶ್ರೀರಾಮ್ ಅವರ ಲೇಖನ ಎಂದು ಬರೆಯಲಾಗಿತ್ತುಅದು ಸತ್ಯಕ್ಕೆ ದೂರವಾದ ಮಾತುನಾನು ನಕ್ಸಲ್ಗಳಬಗ್ಗೆ ಓದಿ ಅವರ ಚಟುವಟಿಕೆಗಳ ಬಗ್ಗೆಕುತೂಹಲಿಯಾಗಿದ್ದೆನಾಗಲೀಅವರನ್ನು ಸಮೀಪದಿಂದ ಕಂಡವನಲ್ಲವರವರರಾವು ಅವರನ್ನು ಒಮ್ಮೆ ಭೇಟಿಯಾದದ್ದುಮಾತ್ ನೆನಪಿದೆಅದೂಬೆಂಗಳೂರಿನಲ್ಲಿಹತ್ತುನಿಮಿಷಗಳ ಮಟ್ಟಿಗೆಹೀಗಾಗಿ  ಲೇಖನ ನನ್ನ ಓದಿನ ಮತ್ತು ಜನರೊಂದಿಗಿನ ಮಾತುಕತೆಯ ಫಲಿತವಾಗಿ ಬರೆದದ್ದು ಅಷ್ಟೇ..  ಹದಿನೆಂಟುವರ್ಷಗಳಲ್ಲಿ ಹೆಚ್ಚುಬದಲಾಗಿದೆಯೇಗೊತ್ತಿಲ್ಲ]ಆರು ವರ್ಷಗಳ ಹಿಂದೆನೌಕರಿಗೆಂದು ಹೈದರಾಬಾದ್ ಹೊಕ್ಕಾಗಮೊದಲ ಬಾರಿಗೆ ಕಾಳಜಿಪೂರ್ವಕವಾಗಿ ನಕ್ಸಲೈಟ್ ಎಂಬ ಪದಬಳಕೆಯಾಗುವುದನ್ನು ಕಂಡೆ.

ಅದಕ್ಕೂ ಮೊದಲು -
ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾದಲ್ಲಿ ಓದಿದ್ದ - ಸಿಲಿಗುಡಿಯ ಬಳಿಯ ನಕ್ಸಲ್ಬರಿ ಗ್ರಾಮದ ರೈತಾಂಗ ಬಂಡೆದ್ದ ಕಥೆ, ಮಿಥುನ್ಚಕ್ರಬೋರ್ತಿ ಎಂಬಂಥ ಹಿಂದಿ ಚಿತ್ರನಟ ಹಿಂದೆ ನಕ್ಸಲೈಟ್ ಆಗಿದ್ದ ಎಂಬ ವದಂತಿ ಎಲ್ಲವೂ೧೮೯೫ರಲ್ಲಿ ಬಂಡೆದ್ದು ದಂತಕಥೆಯಾದ ಬಿರ್ಸಾ ಮುಂಡಾನ ಕಥೆಯಷ್ಟೇಅಥವಾ ತೆಲಂಗಾಣಾ ರೈತಾಂಗ ಹೋರಾಟದಲ್ಲಿ ಅಮರನಾದ ದೊಡ್ಡಿ ಕೊಮುರಯ್ಯನಕಥೆಯಷ್ಟೇ ಪರಕೀಯವಾಗಿ ನನ್ನಂತರಂಗವನ್ನ ಹೊಕ್ಕಿತ್ತು.

ಆಗಅದೇ ಕಾಲದಲ್ಲಿ ನಿಜಾಮಾಬಾದ್ ಜಿಲ್ಲೆಯ ಜಂಗಂಪಲ್ಲಿ ಗ್ರಾಮದಲ್ಲಿ ನಕ್ಸಲ್ ಚಟುವಟಿಕೆಯ ತರಂಗಗಳೂ ನಮ್ಮನ್ನ ತಾಗಿದ್ದುವು.ಪಕ್ಕದೂರಿನ ದೊರ ನಕ್ಸಲ್ಗಳಿಂದ ದೋಚಲ್ಪಟ್ಟಿದ್ದಹೀಗಾದರೂಅಪಹರಣದ ಸುದ್ದಿಯಾಗಲೀತೊಟ್ಟು ರಕ್ತ ಚೆಲ್ಲಿದ ಖಬರಾಗಲೀಕೇಳಿಬಂದಿರಲಿಲ್ಲ.

ನಕ್ಸಲೈಟುಲನು ಅನ್ನಲನ್ನಡು - ಗದ್ದೆಕೆಕ್ಕಿನ ಮರ್ಸಟಿ ರೋಜುರಾಡಿಕಲ್ ಕನುಕನ್ನನು ಚಂಪಿರಕ್ತಂ ಬೊಟ್ಟು ಪೆಟ್ಟುಕುನ್ನಡು(ನಕ್ಸಲೈಟರನು ಅಣ್ಣಂದಿರೆದನುಕುರ್ಚಿಯೇರಿದ ಮಾರನೆ ದಿನವೇ ರ್ಯಾಡಿಕಲ್ ಕನುಕನ್ನನ ಕೊಂದು ರಕ್ತದ ತಿಲಕ ಇಟ್ಟುಕೊಂಡನು)ಎಂದು ಅಂದಿನ ಮುಖ್ಯಮಂತ್ರಿಯನ್ನು ನಕ್ಸಲ್ಗಳು ಇಂದು ಹೀಗೆ ವಿವರಿಸಲಿರುವರೆಂದು ಊಹಿಸಿರದ ಕಾಲಸುದ್ದಿಪತ್ರಿಕೆಗಳು ಎನ್ಕೌಂಟರ್ ಎಂಬ ಪದದಿಂದ ತುಂಬಿದ್ದ ಸಮಯಹಾಗೂ ಎನ್ಕೌಂಟರ್ ನಲ್ಲಿ ಪೋಲೀಸರ,ನಕ್ಸಲ್ಗಳ ಸಾವಿನ ಸುದ್ದಿ ಕೇಳಿಬರುತ್ತಿದ್ದ ಸಮಯ.

ಅಥವಾ:
ನಕ್ಸಲ್ಬರಿಲೋನಾಗಲಿ ಬಟ್ಟಿನ ರೈತು ಗುಂಡೆ ಪೈ ಗುಂಡ್ಲ ವರ್ಷಮುನು ಕುರಿಪಿಂಚಿಂಡ್ರು
ಕಲಕತ್ತಾ ನಡಿವೀಧುಲ್ಲೋನ ನೆತ್ತುರಿಜೇರುಲು ಪಾರಿಂಚಿಂಡ್ರು
(ನಕ್ಸಲ್ಬರಿಯಲಿ ಗುದ್ದಲಿ ಹಿಡಿದ ರೈತರೆದೆಯಮೇಲೆ ಗುಂಡಿನ ಸುರಿಮಳೆ ಸುರಿಸಿದರುಕಲಕತ್ತಾ ನಡುಬೀದಿಗಳಲಿ ರಕ್ತದ ಝರಿಯಹರಿಸಿದರುಎಂದು ಹಾಡಿದ ದೂರದ ಕಲಕತ್ತಾ ಕಥೆಗೂ ಸಮೀಪದ ಎನ್ಕೌಂಟರ್ಗಳಿಗೂಸಂಬಂಧ ಕಾಣಿಸದ ಕಾಲವದು ಎಂದೂಹೇಳಬಹುದು.

ಚಂಡ್ರಪುಲ್ಲಾರೆಡ್ಡಿ ಎಂಬ ನಕ್ಸಲ್ ನಾಯಕನ ನಿಧನನಡೆದಾಡಲೂ ಕೈಲಾಗದೇ ಪೋಲೀಸ್ ದಸ್ತಗಿರಿಯಲ್ಲೇ ಉಸ್ಮಾನಿಯಾ ಆಸ್ಪತ್ರೆಗೆಅಡ್ಮಿಟ್ ಆಗಿದ್ದ ಎನ್ನಲಾದ ಕೊಂಡಪಲ್ಲಿ ಸೀತಾರಾಮಯ್ಯ ಎಂಬ ನಕ್ಸಲ್ ನಾಯಕ ರೋಮಾಂಚಕಾರಿಯಾಗಿ ತಪ್ಪಿಸಿಕೊಂಡ ದಂತ ಕಥೆ,ರಂಗುಲ ಕಲ ಚಿತ್ರದಲ್ಲಿ ಪೈಲಂ ಕೊಡುಕೋಪಟ್ನಂ ಕೊಡುಕೋ ಎಂಬ ಹಾಡಿನೊಂದಿಗೆ ಕಂಡ ಕೆಂಬಾವುಟ ಹಿಡಿದ ಭೂಗತಗದ್ದರ್ಹಾಗೂ ಕಂಡ ಮೇಲೇ ಕೇಳಿದ ಅವನ ಹೆಸರು ಯಾವುದೂ ಹೃದಯ ತಟ್ಟಿದ ವಿಷಯ ಆಗಿರಲಿಲ್ಲಎಲ್ಲೋ ದೂರದಬೊಲೀವಿಯಾದಲ್ಲಿ ನಡೆದ ಚೆ ಗವೇರನ ಕಥೆಯಷ್ಟೇ ಪರಕೀಯವಾಗಿ ಕಂಡಿದ್ದ ಅಂಶಗಳಿವು.

ಆದರೆ ಈಚೆಗೆ ತೆಲಂಗಾಣಾದಲ್ಲಿ ಸುತ್ತಾಡಿದಾಗ ಅನಿಸಿದ್ದುತೆಲಂಗಾಣಾ ಬದಲಾದ ಜಾಗ ಎಂದುಬದಲಾದ ಜಾಗ ಎಂದರೇನು?೧೯೪೬ರ ರೈತಾಂಗ ಚಳವಳಿಯ ನಂತರವೂ ಅಲ್ಲಿನ ಭೂಸ್ವಾಮ್ಯ ಪದ್ಧತಿ ಒಂದಿಷ್ಟೂ ಬದಲಾಗಿಲ್ಲಶೋಷಣೆಯೂ ಅದೇ ಮಟ್ಟದಲ್ಲಿದೆಎಂದು ವಾದಿಸುವವರಿರಬಹುದು.

ತೆಲಂಗಾಣಾ ರೈತಾಂಗ ಚಳವಳಿಯ ನಂತರ ಭೂಸಂಸ್ಕರಣೆಯ ಕಾಯಿದೆ ಜಾರಿಗೆ ಬಂದು  ಪ್ರಾಂತದ ಭೂ ಹಿಡವಳಿಯ ಸಾಮಾಜಿಕನಿರ್ಮಿತಿಯ ಕ್ರಮದಲ್ಲಿ ಕೆಲವು ಸ್ಪಷ್ಟ ಬದಲಾವಣೆಗಳಾದುವು ಎಂಬ ಧನಗರೆಯವರ ಮಾತಿಗೆ ವಿರುದ್ಧವಾಗಿ:
ಭೂ ಸಂಸ್ಕರಣಮೊಕ ಬೂಟಕಂಬುರಾದೋಪಿಡಿ ದೊಂಗಲ ನಾಟಕಂಬುರಾ,
ರೈತುದೇಶಮುಲೊ ರೈತು ಬಿಡ್ಡಕೇ ಭೂಮಿಲೇದುಯೆಟ್ಲಾ ನಾಯನಾ
ಪೆದ್ದ ಪೆದ್ದ ಭೂಸ್ವಾಮುಲೇಮೊರಾತಿಮ್ಮಿದಿ ಬೊಮ್ಮಿದಿ ಚೇಸಿನಾರುರಾ
ಸೆಂಟು ಭೂಮಿ ಚೇಜಾರಕುಂಡರಾಕುಕ್ಕ ಪೇರುನಾನಕ್ಕ ಪೇರುನಾ
ಲೆಕ್ಕಲು ವ್ರಾಸಿ ಚೇತುಲೆತ್ತಿನರು......
(ಭೂಸಂಸ್ಕರಣೆ ಒಂದು ಬೂಟಾಟಿಕೆದರೋಡೆಗಳ್ಳರ ನಾಟಕರೈತರ ದೇಶದಲಿ ರೈತಪುತ್ರನಿಗೇ ಭೂಮಿಯಿಲ್ಲ ಇದು ಹೇಗಪ್ಪೋದೊಡ್ಡಭೂಸ್ವಾಮಿಗಳು ಒಂದು ಸೆಂಟೂ ನೆಲ ಬಿಡದೇ ನಾಯಿನರಿಗಳ ಹೆಸರಲ್ಲಿ ಬರಕೊಂಡು ಕೈಯೆತ್ತಿದರಲ್ಲಪ್ಪೋಎಂದುಜನನಾಟ್ಯಮಂಡಲಿಯವರು ಹಾಡುವರುಇದರಲ್ಲಿ ಸತ್ಯಾಂಶವಿದ್ದರೂ ಇರಬಹುದು.

ಆದರೆ ನಾನಾಡುತ್ತಿರುವ ಬದಲಾವಣೆಯ ಮಾತು  ಅರ್ಥದ ಬದಲಾವಣೆದಲ್ಲಇಂಥಹ ಕ್ರಾಂತಿಕಾರಕ ಬದಲಾವಣೆಗಳು ಕಳೆದಾರುವರ್ಷಗಳಲ್ಲಿ ಆಗಿಲ್ಲವೆಂಬುದೂ ಎಲ್ಲರಿಗೂ ತಿಳಿದ ವಿಷಯವೇಬದಲಾವಣೆ ಇಂಥದ್ದು:

ಜಂಗಂಪಲ್ಲಿಯ ದೊರ ಮಹೇಂದ್ರಾರೆಡ್ಡಿ ಈಗ ಅಲ್ಲಿಲ್ಲಆತ ಹೈದರಾಬಾದಿನಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾನೆಹಾಗೂಜಂಗಂಪಲ್ಲಿಗೆ ಹೋಗುವುದು ಅಪರೂಪಸಂಜೆ ನಾಲ್ಕರ ನಂತರ ನಿಜಾಮಾಬಾದ್ನಿಂದ ಮೆದಕ್ ಮಾರ್ಗವಾಗಿ ಓಡುತ್ತಿದ್ದ ರಾಜ್ಯಪರಿವಹನ ನಿಗಮದ ಬಸ್ಸುಗಳು ರದ್ದಾಗಿದ್ದಾವೆ. (ಇದು ಕೆಲವರ್ಷಗಳ ಹಿಂದಿನ ಮಾತುಈಗ ಪರಿಸ್ಥಿತಿ ಉತ್ತಮಗೊಂಡಿದೆ) .ಮಾಲ್ತುಮ್ಮೆದ ಸಹಕಾರ ಸಂಘದ ಅಧ್ಯಕ್ಷ ತನ್ನ ಪದವಿಕಾಲ ಮುಗಿಯುವುದಕ್ಕೆ ಮೂರು ತಿಂಗಳ ಮೊದಲೇ ರಾಜೀನಾಮೆ ಪತ್ರತಯಾರಿಸಿಟ್ಟಿದ್ದಾನೆ.

ಮತ್ತು -
ಅದೇ ಜಂಗಂಪಲ್ಲಿಯ ಸಂಘದ ಅಧ್ಯಕ್ಷ ಗುವ್ವ ಬುಚ್ಚಯ್ಯಫರ್ಟಿಲೈಜರ್ ಕಾರೊಬಾರಿನಲ್ಲಿ ಹಣ ನುಂಗಿದ್ದನ್ನ ಪ್ರಜಾಕೋರ್ಟಿನ ಮುಂದೆಒಪ್ಪಿ ಪದವಿ ತ್ಯಾಗ ಮಾಡಿದ್ದಾನೆಕಾರ್ಯದರ್ಶಿ ಬಾಲರಾಜು ಒಳ್ಳೆಯ ಸಂಬಳ ಬರುತ್ತಿದ್ದ ತನ್ನ ಪರ್ಮನೆಂಟ್ ಕೆಲಸ ಬಿಟ್ಟಿದ್ದಾನೆ.ಕರೀಂನಗರದ ಡಾಕ್ಟರುಗಳು ರೋಗಿಯೊಬ್ಬನ ಬಳಿ ರೊ.೧೫ಕ್ಕಿಂತ ಹೆಚ್ಚು ಶುಲ್ಕ ಪಡೆಯಲು ಹಿಂಜರಿಯುತ್ತಾರೆ.

ಇದು ಬರೇ ಜಂಗಂಪಲ್ಲಿಯಮಾಲ್ತುಮ್ಮೆದಕರಿಂನಗರದ ಕಥೆಯಷ್ಟೇ ಅಲ್ಲ ಎಂಬುದೂ ಮುಖ್ಯ.

ಇಂಥ ಕಥೆಗಳೂದಿಢೀರ್ ನ್ಯಾಯ ಒದಗಿಸುವ ಪ್ರಜಾಕೋರ್ಟಿನ ವ್ಯವಸ್ಥೆ - ಮತ ನೀಡಿ ಎಬ್ಬಿಸಿದ ಬೃಹತ್ ಸಹಕಾರಿ ಯಂತ್ರಾಂಗಮಾಡಲಾರದ್ದನ್ನು ಚಿಟಿಕೆ ಹೊಡೆವಲ್ಲಿ ಮಾಡಿ ಮುಗಿಸುವ ಪರ್ಯಾಯ ವ್ಯವಸ್ಥೆ - ಅಂತರಂಗದ ಖುಷಿಯನ್ನ ನೀಡುತ್ತದೆನಿಜಆದರೆ ಕಥೆ ಇಲ್ಲಗೇ ಮುಕ್ತಾಯವಾಗುವುದಿಲ್ಲವಾದ್ದರಿಂದ  ಸತ್ಯ ಕಠೋರವಾಗುತ್ತದೆ.

 ಇಂಥ ಕಥೆಗಳನ್ನ ಸತ್ಯವಾಗಿಸುವುದು ಸರಳವಲ್ಲಇಂಥ ಕಥೆಗಳ ಹಿನ್ನೆಲೆಯಲ್ಲಿ ಕಠೋರ ಕ್ರೌರ್ಯದಅತ್ಯಂತ ಭೀತಿಯ ಭಾವನೆಅಡಕವಾಗಿರುತ್ತದೆರಕ್ತ ಸಂಬಂಧದ ಸಂದರ್ಭದಲ್ಲಿ ಮಾತನಾಡುವ ರಕ್ತ  ಪ್ರತೀಕಕ್ಕೂಬಲಿದಾನದ ಸಂದರ್ಭದಲ್ಲಿ ಹರಿವ ರಕ್ತದಪ್ರತೀಕಕ್ಕೂ ವ್ಯತ್ಯಾಸವಿದೆಯಷ್ಟೆಇಲ್ಲವಾದರೆ ಗುವ್ವ ಬುಚ್ಚಯ್ಯನೀನು ರಾಜೀನಾಮೆ ಕೊಡು ಎಂದಾಕ್ಷಣಕ್ಕೇ ರಾಜೀನಾಮೆ ಕೊಡುವಷ್ಟುಸಾಧುಪ್ರಾಣಿ ಆಗಿದ್ದರೆಆತ ಸಹಕಾರ ಸಂಘದ ಅಧ್ಯಕ್ಷನಾಗುತ್ತಿದ್ದುದಾದರೂ ಹೇಗೆಮತ್ತು ಏಕೆ?

ಕೈಕಾಲು ಕಡಿಯುವಪ್ರಾಣ ತೆಗೆಯುವರಕ್ತ ಚೆಲ್ಲುವನಿರಂತರ ಭೀತಿಯಲ್ಲಿ ಜನರ ಒಳಿತನ್ನು ಕಾಪಾಡುವಬೆದರಿಸಿ ನ್ಯಾಯಒದಗಿಸುವಸದ್ಯದ ವ್ಯವಸ್ಥೆಯಿಂದ ರೋಸಿ ಹೋದವರಿಗೆ ಆಶಾಕಿರಣದಂತೆ ಕಾಣುವ ಕ್ಷುದ್ರ ನ್ಯಾಯವ್ಯವಸ್ಥೆ ರೂಪತಾಳುವುದುಹೈದರಾಬಾದಿನ ಪ್ರತೀಗೋಡೆಯ ಮೇಲೂ ಕಾಣಿಸುವ ಮಾವೋ ತ್ಸೆ ತುಂಗನ (ಮಾವೋನ ಹೆಸರನ್ನು ಈಗಿತ್ತಲಾಗಿ ಮಾವೋ ಜೆಡಾಂಗ್ ಎಂದು ಎಲ್ಲ ಕಡೆ ಬರೆಯುತ್ತಿದ್ದರೂನಾನು  ಲೇಖನಕ್ಕೆಕಿವಿಗಿಂಪಾಗಿಚಂದ್ರಶೇಖರ ಕಂಬಾರರ ಪದ್ಯವಾಗಿ ನಿಂತಿರುವ ತ್ಸೆತುಂಗ ಎಂಬ ಉಚ್ಚಾರಣೆಯನ್ನೇ ಬಳಸಿದ್ದೇನೆ.) ಕೆಂಪು ಅಕ್ಷರಗಳ ವೇದವಾಕ್ಯದಿಂದ - "Power comes out of the barrel of the gun."


ಸಮಸಮಾಜದ ಆಶಯಮಂತ್ರ ಇಂದು ನಿನ್ನೆಯದಲ್ಲಇದು ತಲೆತಲಾಂತರದಿಂದ ಉಚ್ಚರಿಸಲ್ಪಟ್ಟದ್ದುಆದರೆ ಸಮಸಮಾಜದಉಟೋಪಿಯನ್ ಕನಸು ಕನಸಾಗಿಯೇ ಉಳಿಯುವುದು ಸಹಸೋವಿಯತ್ ರಷ್ಯಾದ ಕನಸಾಗಲೀಚೀನಾದ ಕನಸಾಗಲೀಪೂರ್ವಯೂರೋಪ್ ಕನಸಾಗಲೀ ನನಸಾಗುವುದು ಸರಳವೂ ಅಲ್ಲವಾಸ್ತವವಾದೀ ದೃಷ್ಟಿಕೋನವೂ ಅಲ್ಲಆದರೂಜಗತ್ತಿನ ಯಾವುದೇಕ್ರಾಂತಿಯ ಚರಿತ್ರೆಯನ್ನ ಗಮನಿಸಿದರೆವೇದ್ಯವಾಗುವುದುಬಡವರುಅತೀ ಬಡತನದಲ್ಲಿ ಶ್ರೀಮಂತರು ಅತೀ ಶ್ರೀಮಂತಿಕೆಯಲ್ಲೂಕೇಂದ್ರೀಕೃತವಾದಾಗಧೃವೀಕರಣ ಆದಾಗಪ್ರತಿಭಟನೆಜನರಿಂದಲೇ ಉದ್ಭವಿಸುತ್ತದೆಂಬುದುಮತ್ತು ಒಂದು ಮಟ್ಟದ ಸಮತೋಲನಇರುವಷ್ಟು ದಿನವೂ ಬಂಡಾಯದ ಯತ್ನ ಸುಪ್ತಾವಸ್ಥೆಯಲ್ಲೇ ಇರುತ್ತದೆಂಬುದು.

ಆತ ಕಟ್ಟಾ ಸಮಾಜದ ವಿರೋಧಿಯಾಗಿದ್ದಜಗತ್ತಿನ ಇಡೀ ಐಶ್ವರ್ಯವನ್ನು ಸರಿಸಮನಾಗಿ ಭೂಗ್ರಹದ ಪ್ರತಿ ಜೀವಿಗೂ ಹಂಚಿದರೆ,ಒಬ್ಬೊಬ್ಬರಿಗೂ ಕೇವಲ ೩೫ ಸೆಂಟುಗಳಿಗಿಂತಲೂ ಕಡಿಮೆ ಸಿಗುವುದೆಂಬ ಲೆಕ್ಕಾಚಾರವನ್ನು ಆತ ಮಾಡಿದ್ದರಿಂದಕ್ರಾಂತಿನಿಷ್ಪ್ರಯೋಜಕವೆಂದು ನಂಬಿzಇಸಾಬೆಲ್ ಅಯೆಂಡೆ ತನ್ನ ಕಾದಂಬರಿ ಈವಾಲೂನಾ  ಒಂದು ಪಾತ್ರವನ್ನು ಚಿತ್ರಿಸುವುದು ಹೀಗೆ.ಫಿಡೇಲ್ ಕಾಸ್ಟ್ರೋನ ಗೆಳೆಯನಾಗಿದ್ದ ಸಾಲ್ವಡಾರ್ ಅಯಂಡೆಯ ಸಂತತಿಪಾಬ್ಲೊ ನೆರೂಡಾಗಾರ್ಸಿಯಾ ಮಾರ್ಕೇಸ್ರಿಂದ ಸ್ಫೂರ್ತಿಪಡೆದ ಇಸಾಬೆಲ್ ಹೀಗೆ ಬರೆದಾಗ್ಯೂಆಕೆಯಾಗಲೀಸಮಾಜವಾದಿಗಳಾಗಲೀಕಡೆಗೆ ಬಂಡವಾಳಶಾಹಿಗಳೇ ಆಗಲೀ ಸಮಸಮಾಜದಉಟೋಪಿಯನ್ ಆಶಯದ ಕನಸು ಕಾಣುವುದನ್ನು ಬಿಡುವುದಿಲ್ಲ.

ಇದೇ ಆಶಯಮಂತ್ರವನ್ನು ಉಚ್ಚರಿಸುತ್ತಾ ತಮ್ಮನ್ನು ತಾವೇ ನಕ್ಸಲ್ವಾದಿಗಳೆಂದು ಕರೆದುಕೊಳ್ಳುವ ತೆಲಂಗಾಣಾದ  ಜನ ಒಂದುಹಿನ್ನೆಲೆಚರಿತ್ರೆಯ ಬೆಂಬಲದೊಂದಿಗೆ ಬಂದವರುತಮ್ಮ ಬೇರುಗಳನ್ನು ತೆಲಂಗಾಣ ರೈತಾಂಗ ಹೋರಾಟಕ್ಕೆ ಇಳಿಬಿಟ್ಟು ಅಲ್ಲಿಂದ ತಮ್ಮಮೂಲಸೆಲೆಯನ್ನ ಪಡೆದವರು.

ತೆಲಂಗಾಣ ರೈತಾಂಗ ೧೯೪೬ರಲ್ಲಿ ಬಂಡೇಳಲು ಚಾರಿತ್ರಿಕ ಸಾಮಾಜಿಕ ಕಾರಣಗಳಿದ್ದುವುಆಗ ಗುಲಾಮಗಿರಿಯ ಸಂಕೇತವಾದವೆಟ್ಟಿ ತೆಲಂಗಾಣದಲ್ಲಿ ಚಾಲ್ತಿಯಲ್ಲಿತುವ್ಯಕ್ತಿಯ ಶ್ರಮ ಮಾತ್ರವೇ ಅಲ್ಲದೇಶರೀರವೂ ಪರಕೀಯವಾಗಿತ್ತು. (ಅಂದಿನಭೂಸ್ವಾಮ್ಯಸಮಾಜದಲ್ಲಿ ಶರಿರ ತನ್ನದೇ ಆದರೂಅಂಗಾಂಗಗಳುಅವುಗಳ ಚಾಲನೆ ಭೂಸ್ವಾಮಿಗಳಜಮೀಂದಾರರ ಕೈಯಲ್ಲಿತ್ತುಅವನ ಮನೆ,ಮಡದಿಭೂಮಿ ಎಲ್ಲದರ ಮೇಲೂ ಜಮೀಂದಾರರ ಅಧಿಕಾರವಿತ್ತು. ಎಂದು ಜಯಧೀರ್ ತಿರುಮಲರಾವು ವಿವರಿಸಿದರೆಇದೇವಿಷಯವನ್ನು ದಾಶರಥಿ ರಂಗಾಚಾರ್ಯ ತಮ್ಮ ಕಾದಂಬರಿ ಚಿಲ್ಲರ ದೇವುಳ್ಳುವಿನಲ್ಲಿ  ಊರಲ್ಲಿರುವವರಲ್ಲಿ ಇಬ್ಬರೋ ಮೂವರೋಮಾತ್ರ ಮನುಷ್ಯಜಾತಿಗೆ ಸೇರಿದವರುಮಿಕ್ಕವರೆಲ್ಲಾ ದೊರೆ ಕೊಟ್ಟಿಗೆಯಲ್ಲಿ ಕಟ್ಟಿದ ದನಗಳು - ಎಂದುಕೊಂಡ ಎಂದುಬರೆಯುತ್ತಾರೆ.

ಅಂದಿನ ಹೋರಾಟ ಕಮ್ಯುನಿಸ್ಟ್ ಪಕ್ಷದ ಬೆಂಬಲದಿಂದ ನಡೆಯಿತು೧೯೪೬ರಿಂದ ಐದು ವರ್ಷಗಳ ಕಾಲಪಕ್ಷ  ಚಳವಳಿಯನ್ನುನಡೆಸಿಕೊಂಡು ಬಂತುಬಹುಶಃ ಅಷ್ಟೂದಿನ ಅವರು ಸುಧಾರಣೆಯ ನಿರೀಕ್ಷೆಯಲ್ಲಿ:
ಯಾರಿಗೆ ಬಂತುಯಾರಿಗೆ ಬಂತು
ನಲವತ್ತೇಳರ ಸ್ವಾತಂತ್ರ?
ಅಂತ ಕೇಳುತ್ತಾ ಇದ್ದಿದ್ದಿರಬೇಕು.
ಕೊಡಲಿ ಹಿಡಿದು ದುಡಿಯುವುದುಮತ್ತು ಅವಿಶ್ರಾಂತ ದುಡಿಯುತ್ತಿದ್ದುದನ್ನು ಗಮನಿಸಿದರೆಅವರು ದಿನವೂ ಹೋರಾಟಕ್ಕೆಸಂಸಿದ್ಧರಾಗಿದ್ದರೆನ್ನಿಸುತ್ತದೆಇಂಥ ಹೋರಾಟಗಾರರಿಗೆ ಪ್ರತ್ಯೇಕವಾಗಿ ಸಿಗಬಹುದಾಗಿದ್ದ ಶಿಕ್ಷಣ ಇವರಿಗೆ ಜೀವನವೇ ನೀಡಿತು.ಜಮೀಂದಾರರ ದೌರ್ಜನ್ಯಕ್ಕೊಳಗಾಗಿ ಕಕ್ಕಾಬಿಕ್ಕಿಯಾಗಿದ್ದ ಇವರಿಗೆ ಜೀವನವೇ ಒಂದು ಹೋರಾಟವಾಯಿತುಅವರ ಚಳವಳಿಗೆ ಅವರಜೀವನವೇ ಹಿನ್ನೆಲೆಯಾಯಿತುಗುದ್ದಲಿಕತ್ತಿಕುಡುಗೋಲು ಮುಂತಾದ ನಿತ್ಯೋತ್ಪತ್ತಿಯ ಸಾಧನಗಳೇ ಅವರಿಗೆ ಹೋರಾಟದಆಯುಧಗಳಾದವು ಹೀಗೆಅಂತರಂಗದ ಅವಶ್ಯಕತೆಯಿಂದ ಚಿಮ್ಮಿಬಂದ ಹೋರಾಟವಿದುಹೀಗೆ ವಿವರಣೆ ಕೊಟ್ಟ ತಿರುಮಲರಾವುವಾಕ್ಯಗಳುಅಂದಿನ ಪರಿಸ್ಥಿತಿಯ ಸಶಕ್ತ ಚಿತ್ರಣ ನೀಡುವುದುಇದೊಂದು ದೊಡ್ಡ ಪೆಟ್ರೋಲು ಟ್ಯಾಂಕಿನಂತಹ ಪರಿಸ್ಥಿತಿಇದು ಭುಗಿಲೆದ್ದುಉರಿಯಲು ಬೇಕಾದ್ದು ಕಮ್ಯುನಿಸ್ಟರ ರೂಪದಲ್ಲಿ ಬಂದ ಒಂದೇ ಒಂದು ಕಿಡಿ ಮಾತ್ರ.

ಅಂದು ಪ್ರಾರಂಭವಾದ ಚಳವಳಿಜನಬೆಂಬಲದಿಂದಲೇ ಐದು ವರ್ಷಕಾಲ ಮುಂದುವರೆಯಿತುಸುಮಾರು ೪೦೦೦ ಹಳ್ಳಿಗಳಲ್ಲಿನಲ್ಲಗೊಂಡವರಂಗಲ್ಖಮ್ಮಂಜಿಲ್ಲೆಗಳಲ್ಲಿ - ಪರ್ಯಾಯ ಸರಕಾರನ್ಯಾಯವ್ಯವಸ್ಥೆಯನ್ನು ಚಳವಳಿಗಾರರು ಶಕ್ತರೀತಿಯಲ್ಲಿಏರ್ಪಡಿಸಿದ್ದುಇಂದಿನ ಪ್ರಜಾಕೋರ್ಟುಗಳಿಗೆ ಅಂದೇ ಬೀಜ ಬಿತ್ತಿದಂತಾಗಿತ್ತು.

ಹೀಗೆಸಹಜಸ್ಫೂರ್ತಿಯಿಂದ ಬಂಡೆದ್ದ ತೆಲಂಗಾಣ ರೈತ ಚಳವಳಿಯಲ್ಲಿ ಇಂದಿನ ನಕ್ಸಲ್ಗಳು ತಮ್ಮ ಬೇರುಗಳನ್ನು ಕಂಡುಕೊಂಡಿದ್ದಾರೆ.ಅಂದು ಅವರು ಕರೆಯುತ್ತಿದ್ದ ಚೀಟಿ ಸಂಗಂ ಎಂಬ ಕಮ್ಯುನಿಸ್ಟ್ ಪಕ್ಷದ ಹೆಸರನ್ನೇ ಇಂದೂ ಎರ್ರ ಜೆಂಡಾ ಸಂಘಂ ಎಂದು ಸ್ಪಷ್ಟಪ್ರತಿಮೆಗಳೊಂದಿಗೆ ಮುಂದುವರೆಸಿದ್ದಾರೆಪ್ರಜಾನಾಟ್ಯಮಂಡಲಿಈಗ ಇನ್ನೂ ಜನರ ಬಳಿಗೆ ಬಂದು ಜನನಾಟ್ಯಮಂಡಲಿಯಾಗಿದೆ.ಹಾಗೂ ಅಂದಿನ ಸಂಕೇತಗಳನ್ನೇ ಇಂದೂ ಮುಂದುವರೆಸಿದ್ದಾರೆ.
‘Those who do not learn from history are condemned to relive it.’ (ಚರಿತ್ರೆಯಿಂದ ಪಾಠ ಕಲಿಯದವರು ಅದನ್ನ ಪುನಃ ಅನುಭವಿಸುವಶಾಪ ಪಡೆಯುತ್ತಾರೆಎಂದ ಜಾರ್ಜ್ ಸಾಂತಾಯನನ ಮಾತುಗಳನ್ನು ದೃಷ್ಟಿಯಲ್ಲಿಟ್ಟುಚರಿತ್ರೆಯ ದೃಕ್ಪಥವನ್ನು ನಾವುಗಮನಿಸಬೇಕಾಗಿದೆಚರಿತ್ರೆ ಬರೇ ಬೆಂಬಲವನ್ನಷ್ಟೇ ನೀಡುವುದಿಲ್ಲ - ಅದರ ತೊಂದರೆಯನ್ನೂ ನೀಡುತ್ತದೆ ತೊಂದರೆಗಳನ್ನೂ ನಾವುಗಮನಿಸುವುದು ಅವಶ್ಯಕ.

ಕಾರಣ:
ನಕ್ಸಲ್ಗಳನ್ನು ಸೆದೆಬಡೆವಥಳಿಸುವಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುವ ಸರಕಾರ ಎಂಬ ವ್ಯವಸ್ಥೆಯೂ ಚರಿತ್ರೆಯಿಂದ ತನ್ನ ಪಾಠವನ್ನಕಲಿತಿರಲಿಕ್ಕೆ ಸಾಕು.

ಇಷ್ಟೆಲ್ಲಾ ಚರಿತ್ರೆಯಲ್ಲಿ ಬೇರುಬಿಟ್ಟತಮ್ಮ ಹೆಸರಿಗೆ ಕಾರಣವಾದ ನಕ್ಸಲ್ಬರಿ ಚಳವಳಿಗೂ ಮುಂಚಿನ ಚಳವಳಿಗಳಲ್ಲಿ ತಮ್ಮನ್ನುಗುರುತಿಸಿಕೊಂಡ ಇಂದಿನ ನಕ್ಸಲ್ಗಳು  ಚರಿತ್ರೆಯನ್ನು ಅಂತರ್ಗತಮಾಡಿಕೊಂಡೂಚಾರೂ ಮಜುಂದಾರನ ಧೋರಣೆಗೊಗ್ಗುವನಕ್ಸಲ್ಗಳಾಗಿಯೇ ಮುಂದುವರೆಯುತ್ತಾರೆ೧೯೬೮ರಲ್ಲಿ ಚಾರೂ ಬರೆದ  ಸಾಲುಗಳು ಇಂದಿಗೂ ನಕ್ಸಲ್ಗಳಿಗೆ ವೇದವಾಕ್ಯ:

ಮೊದಲಬಾರಿಗೆ ರೈತಾಂಗ ತಮ್ಮ ಸಣ್ಣ ಪುಟ್ಟ ಬೇಡಿಕೆಗಳನ್ನಲ್ಲದೇ ಅಧಿಕಾರಮತ್ತು ಆಳುವ ಹಕ್ಕನ್ನು ಪಡೆಯಲು ಹೋರಾಡಿದ್ದಾರೆ.ನಕ್ಸಲ್ಬರಿ ಹೋರಾಟದಿಂದ ನಾವು ಕಲಿಯಬೇಕಾದ ಪಾಠವೇನಾದರೂ ಇದ್ದಲ್ಲಿ ಅದು ಇಷ್ಟೇಸಶಸ್ತ್ರ ಹೋರಾಟ ನಡೆಸುವುದೆಂದರೆಅದು ಭೂಮಿಪೈರುಅನ್ನಕ್ಕಾಗಿ ಅಲ್ಲ - ಸಂಪೂರ್ಣ ಬದಲಾವಣೆಗಾಗಿರಾಜ್ಯಾಡಳಿತದ ಅಧಿಕಾರಕ್ಕಾಗಿ.

 ದೇಶಂ ಮೀದೇ ಸಂಪದ ಮೀದೇಮೀರೆ ಏಲುಕೊಂಡೋ ನಾಯನಾ.. ( ದೇಶವು ನಿಮ್ಮದೆಸಂಪತ್ತೂ ನಿಮ್ಮದೇನೀವೇಆಳಿಕೊಳ್ಳೀ..) ಅನ್ನಲಾರ ತಮ್ಮುಲ್ಲಾರಕೂಲಿಬಿಡ್ಡಲಾರೋ ನಾಯನಾಅಕ್ಕಲಾರ ಚೆಲ್ಲೆಳ್ಳಾರ ರೈತು ಬಿಡ್ಡಲಾರೋ ನಾಯನಾಎಂದು ರೈತ ಕೂಲಿ ಜನಾಂಗಕ್ಕೆ ಗದ್ದರ್ ಬೃಂದದವರು ನೀಡುವ ಕರೆ  ಮೂಲಭೂತ ನಂಬಿಕೆಯಿಂದಲೇ ಉದ್ಭವಿಸಿರುವುದು.

ಆದರೂ:
ತೆಲಂಗಾಣಾದಲ್ಲಾಗಲೀಬಂಗಾಳದಲ್ಲಾಗಲೀ ಕಾರ್ಮಿಕರು ರಾಜ್ಯಾಡಳಿತದ ಹಕ್ಕನ್ನು ಪಡೆಯುವ ವಾಸ್ತವದ ಆಸುಪಾಸಿನಲ್ಲೂ ಇಲ್ಲ.ಬದಲಿಗೆ ಬಂಗಾಳದಲ್ಲಿ  ನಕ್ಸಲ್ಗಳ ಜನ್ಮಶತ್ರುಗಳಾದ ಮಾರ್ಕ್ಸವಾದಿಗಳು ಅನೇಕ ವರ್ಷಗಳಿಂದ ರಾಜ್ಯವಾಳುತ್ತಿದ್ದಾರೆ.

ಹೀಗಾದರೂ:
ದಿಢೀರ್ ನ್ಯಾಯ ಒದಗಿಸುವನಿರಂತರ ದುಃಖಿ ಮಧ್ಯಮವರ್ಗದವರ ಆರಾಮಕುರ್ಚಿ ಕ್ರಾಂತಿಯ ಕನಸನ್ನು  ರೂಪದಲ್ಲಿನನಸುಮಾಡಹೊರಟಿರುವರಾಬಿನ್ಹುಡ್ ಶೈಲಿಯ ಕಾವ್ಯನ್ಯಾಯವನ್ನೊದಗಿಸುವಂತೆ ಕಾಣುವ  ನಕ್ಸಲ್ಗಳನ್ನು ಟೀಕಿಸುತ್ತಲೇಪ್ರೀತಿಯ ಅಂತಃಕರಣ ಬೆಳೆಸಿಕೊಂಡವರಿದ್ದಾರೆ.

ಹಾಗೂ:
ಯಾವ ಲಿಖಿತ ಕಾನೂನಿಗೂ ಒಳಪಡದ ಮದುವೆ ಮಾಡಿಸುವ ಕ್ರಿಯೆಕಾನೂನಿಗೊಳಪಟ್ಟೂ ಏನೂ ಮಾಡಲಾಗದ ಭೂಮಿಯಹಂಚಿಕೆಯಂತಹ ವಿವಾದಗಳನ್ನು ಚಿಟಿಕೆ ಹೊಡೆಯುವುದರಲ್ಲಿ ಪ್ರಜಾಕೋರ್ಟುಗಳಲ್ಲಿ ಇತ್ಯರ್ಥವಾಗುವುದನ್ನು ಕಂಡ ಅನೇಕರು ನಕ್ಸಲ್ಗಳು ಮಾರಾಟಮಾಡುವ ವರ್ಗರಹಿತ ಸಮಸಮಾಜದ ಕನಸು ಕೊಳ್ಳಲು ತಯಾರಿದ್ದಾರೆ.


ನಕ್ಸಲ್ಗಳು ಯಾರುಅವರು ಪ್ರತಿನಿಧಿಸುವುದು ಏನನ್ನುಅವರು ಎಷ್ಟರ ಮಟ್ಟಿಗೆ ತಮ್ಮ ಉದ್ದೇಶ ಸಾಧನೆಯಲ್ಲಿ ಸಫಲರಾಗಿದ್ದಾರೆ?ಅಥವಾ ಅವರ ಉದ್ದೇಶವಾದರೂ ಏನು ಎಲ್ಲ ಪ್ರಶ್ನೆಗಳೂ ಯಾರನ್ನಾದರೂ ಕಾಡಲಿಕ್ಕೆ ಸಾಕುನಕ್ಸಲ್ಗಳು ನಾಸ್ತಿಕರೇ?ಸರ್ವಶೂನ್ಯವಾದಿಗಳೇಎಂದೆಲ್ಲಾ ಪ್ರಶ್ನೆಗಳು ಮನಸ್ಸಿಗೆ ಬಂದಾಗಲೇ ಕಲಕತ್ತಾದ ಕಾಳೀ ಮಂದಿರದಲ್ಲಿ ಪೂಜೆ ಸಲ್ಲಿಸುತ್ತಿದ್ದರೆನ್ನಲಾದನಕ್ಸಲ್ಗಳ ಕಥೆ ನೆನಪಿಗೆ ಬರುತ್ತದೆ:

ಅದನ್ನು ಕಂಡ ಯಾರೋ ಕೇಳಿದರಂತೆ - ಏನಿಲ್ಲಿನಾಸ್ತಿಕರಾದ ನಕ್ಸಲ್ಗಳು ಕಾಳೀಮಂದಿರದಲ್ಲಿ? ಎಂಬುದಕ್ಕೆ ಮಾವೋ ತೊನಕ್ಸಲ್ ಎಂದು ಕಲಕತ್ತಾದ ಕಾಳೀ ಮಾಳನ್ನು ಚೀನಾದ ಚೇರ್ಮನ್ ಮಾವೋ ಜತೆ ಸೇರಿಸಿ ಇಬ್ಬರನ್ನೂ ನಕ್ಸಲ್ಬರಿಗೆ ಕಳಿಸಿದ ಬುದ್ಧಿವಂತರು ನಿರಂತರ ಚಳವಳಿಗಾರರು.

ಮೊದಲಿಗೆ ಉದ್ದೇಶಗುರಿ ಎಲ್ಲವೂ ಸ್ಪಷ್ಟವಾಗಿತ್ತು.
ಅವರೆಲ್ಲರೂ ಒಂದಾಗಿದ್ದರು.
ಕಮ್ಯುನಿಸ್ಟರೂಕಾಂಗ್ರೆಸಿನವರೂ ಸ್ವತಂತ್ರ ಭಾರತದ ಕನಸುಗಾರರುಆಗತೆಲಂಗಾಣಾ ಚಳವಳಿ ಪ್ರಾರಂಭವಾದಾಗ ಬ್ರಿಟಿಷ್ಸಾಮ್ರಾಜ್ಯದ ವಿರುದ್ಧರಾಷ್ಟ್ರೀಯತೆಯ ಪರವಾಗಿ ಇದು ಪ್ರಾರಂಭವಾಯಿತುಇಬ್ಬರ ಕನಸೇನೂ ಒಂದೇ ಆಗಿರಲಿಲ್ಲಕಾಂಗ್ರೆಸ್ಸಿನಅತಿಶುದ್ಧಅಹಿಂಸಾತ್ಮಕ ಮಾರ್ಗ ಕಮ್ಯುನಿಸ್ಟರು ಬಂಡೇಳಲು ಸಹಕಾರಿಯಾಗಿರಲಿಲ್ಲಆದರೂ ಪ್ರಯತ್ನ ಮಾಡಿದರು - ಒಂದುವಿಚಿತ್ರ ಸಂಯೋಜನೆಯ  ಮದುವೆಮುಂದೆ ಮುರಿದುಬೀಳಲೆಂದೇ ನೆರವೇರಿತು.

ಗಾಂಧಿವಾದದ ಪ್ರತಿಭಟನೆಯ ವಿಧಾನದ ಬಗ್ಗೆಅಂತರ್ಗತ ಭಿನ್ನತೆ ಹಾಗೂ ಅಪ್ರಿಯತೆ ಇದ್ದಾಗ್ಯೂ ಕಮ್ಯುನಿಸ್ಟರು ಅವರಜತೆಜತೆಯಲ್ಲೇ ನಡೆದರುಬಹುಶಃ ಹೈದರಾಬಾದ್ ಭಾರತದ ಸಂವಿಧಾನದಡಿ ಸೇರುವುದು ವಾಸ್ತವವಾದೀತೆಂದು ಕಮ್ಯುನಿಸ್ಟರುನಿರೀಕ್ಷಿಸಿರಲಿಲ್ಲವೆನ್ನಿಸುತ್ತದೆಆಗಲೇಅಷ್ಟುಹೊತ್ತಿಗಾಗಲೇ ತೆಲಂಗಾಣಾದ ಚಳವಳಿ ಪ್ರಾರಂಭವಾಗಿಬಿಟ್ಟಿತ್ತಾದ್ದರಿಂದ ಶಾಂತಿಯುತಅಹಿಂಸಾವಾದದ ಚಳವಳಿ ಅವರನ್ನು ಸಾಕಷ್ಟು ಇಕ್ಕಟ್ಟಿಗೂ ಸಿಕ್ಕಿಸಿತ್ತುಮಾನಸಿಕವಾದ  ಆಲೋಚನೆಯನ್ನೂ ಮೀರಿಕಮ್ಯುನಿಸ್ಟರುಪೆಟ್ಟುತಿಂದರೆನ್ನಿಸುತ್ತದೆಸತ್ಯಾಗ್ರಹದ ಭಾಗವಾಗಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿನ ಈಚಲ ಮರಗಳನ್ನುಕಡಿಯತೊಡಗಿದರುತೆರಿಗೆಯ ರೂಪದಲ್ಲಿ ನಿಜಾಮನ ಬೊಕ್ಕಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸೇರುತ್ತಿದ್ದ ರೊಕ್ಕ ಸೇರದಿರಲೆಂಬುದುಒಂದು ಕಾರಣವಾದರೆಕಳ್ಳು ಕುಡಿಯದಿರುವ ಬಗ್ಗೆ ಇದ್ದ ಗಾಂಧಿವಾದದ ನೀತಿಯೂ ಒಂದು ಕಾರಣಇದರ ಫಲವಾಗಿ ಕಮ್ಮುನಿಸ್ಟ್ದಳ ಗಳ ಅನೇಕ ಕಾರ್ಯಕರ್ತರಿಗೆ ವೃತ್ತಿನಾಶವಾಯಿತುಕಳ್ಳು ಇಳಿಸುವವರ ಬೆಂಬಲ ತಪ್ಪುವುದೆಂಬ ಭೀತಿಯೊಂದಿಗೆಕಮ್ಯುನಿಸ್ಟರು ಕಾಂಗ್ರೆಸಿಗರ ಸಂಗ ಬಿಟ್ಟರು. ಎಂದು ಧನಗರೆ ಹೇಳುತ್ತಾರೆಕನಸುಗಾರ ಕಾಂಗ್ರೆಸ್ ಸಂಗವನ್ನು ಅಂದಿಗೆ ವಾಸ್ತವವಾದಿಎನ್ನಿಸಿದಜನಪರ ಎನ್ನಿಸಿದ ಕಮ್ಯುನಿಸ್ಟ್ ಪಕ್ಷ ಬಿಡಬೇಕಾಯಿತು.

ಅಂದು ಗುರಿ ಒಂದೇ ಇದ್ದೂಮಾರ್ಗ ಒಪ್ಪಿತವಾಗಲಿಲ್ಲವಾದ್ದರಿಂದಮೊದಲ ಬಾರಿಗೆ ಎರಡು ಪಕ್ಷಗಳು ಬೇರುಬೇರಾದವುಆನಂತರಮುಂದುವರೆದಮುಂದುವರೆದೇ ಇರುವ  ರೈತಾಂಗ ಹೋರಾಟಅನೇಕ ಮಳೆಗಾಲಗಳನ್ನೂಬರಗಳನ್ನೂ ಕಂಡಿದೆಸ್ವಾತಂತ್ರಬಂದ ನಂತರ ಕಮ್ಯುನಿಸ್ಟರ ಗೆಳೆತನ ಮಾಡಿದ್ದ ಕಾಂಗ್ರೆಸ್ಸು ಅಧಿಕಾರಕ್ಕೆ ಬಂದಂತಾಗಿಅದೇ ವ್ಯವಸ್ಥೆಯ ಅಂಗವೂಸರ್ವಾಂಗವೂ,ಕಡೆಗೆ ಖುದ್ ವ್ಯವಸ್ಥೆಯೇ ಆಗಿಬಿಟ್ಟಿತುಭಾರತ ಸಂವಿಧಾನದಡಿ ಸೇರಲೊಪ್ಪದ ನಿಜಾಮ ನವಾಬಅವನ ರಜಾಕರ ಸೈನ್ಯಸ್ಥಳೀಯಜಮೀಂದಾರರು - ಹಾಗೂ ನಿಜಾಮನ ವಿರುದ್ಧ ಕತ್ತಿ ಎತ್ತಿದ ಭಾರತ ಸರಕಾರಸರಕಾರದಿಂದ ನಿಷೇಧಿಸಲ್ಪಟ್ಟ ಕಮ್ಯುನಿಸ್ಟ್ ಪಕ್ಷ -ಎಲ್ಲರೂ ಎಲ್ಲರ ವೈರಿಗಳಾಗಿ ಹೋದರು೧೯೫೬ರಲ್ಲಿ ಭೂಸುಧಾರಣೆಯ ಕಾಯಿದೆಯ ನೆರಳಿನಲ್ಲಿ ಕಮ್ಯುನಿಸ್ಟ್ ಪಕ್ಷವೂ ತನ್ನಚಳವಳಿಯಿಂದ ವಿರಮಿಸಿತುಆಗ ಅದನ್ನು ವಿರೋಧಿಸಿದರೂಕಮ್ಯುನಿಸ್ಟರಿಂದ ಬೇರ್ಪಟ್ಟ ಮಾರ್ಕ್ಸಿಸ್ಟರೂಚಾರೂ ಮಜುಂದಾರನಉದ್ಭವದೊಂದಿಗೆ ಮಾರ್ಕ್ಸಿಸ್ಟರಿಂದ ಬೇರ್ಪಟ್ಟ ಮಾರ್ಕ್ಸಿಸ್ಟ್-ಲೆನಿನಿಸ್ಟರೂಅವರುಗಳಲ್ಲಿ ಹಂತಹಂತವಾಗಿ ಪಂಥಪಂಥವಾಗಿ ಒಡೆದಮಾವೋವಾದಿಗಳು - ಪಿ.ಡಬ್ಲ್ಯು.ಜಿಕೆ.ಎಸ್.ಗ್ರೂಪ್ಸಿ.ಪಿ.ಗ್ರೂಪ್ಚಾರೂಪರ ವಿನೋದ್ ಮಿಶ್ರಾ ಗ್ರೂಪ್ - ಹೀಗೆಒಂದೇ ಉದ್ದೇಶಸಾಧನೆಗಾಗಿಮಾರ್ಕ್ಸ್ಲೆನಿನ್ಮಾವೋರ ಹೆಸರಿನ ಜೊತೆ ಸರಿಸಮನಾಗಿತಮ್ಮ ಹೆಸರನ್ನೂ ಜೋಡಿಸಹೊರಟವರು ನಮಗೆಕಂಡುಬರುತ್ತಾರೆ.


ಏನಾಗುತ್ತಿದೆ ನೋಡಿ - ಒಂದೇ ವಿಚಾರವಾದವನ್ನ ಪ್ರತಿನಿಧಿಸುವವರು ಯಾರಾದರೂ ಇದ್ದಾರಾಅತಿಯಾಗಿ ಹೊಸ ಹೊಸ ಪಕ್ಷಗಳುಉದ್ಭವಿಸಿವೆನಮ್ಮಿಂದ ಮಾರ್ಕ್ಸವಾದಿಗಳು ಬೇರ್ಪಟ್ಟರುಅವರಿಂದ ನಕ್ಸಲ್ಗಳುಅವರಲ್ಲೂ ಪಂಥಗಳುಒಗ್ಗಟ್ಟಿಲ್ಲದೇ ನಮ್ಮಲ್ಲೇ ನಾವುಕಿತ್ತಾಡುತ್ತಿದ್ದೇವೆನಾವು ಮಾಡಿದ ತಪ್ಪನ್ನು ತಿದ್ದಲು ಸಾಧ್ಯವಿಲ್ಲವೆಂದೇನಲ್ಲಆದರೆ ಶತ್ರುವಿನ ವಿರುದ್ಧ ಹೋರಾಡುವುದಕ್ಕೆ ಬದಲುನಮ್ಮಲ್ಲೇ ನಾವು ಹೋರಾಡುತ್ತಿದ್ದೇವೆ. ಎಂದು ಬ್ರಿಜ್ರಾಣಿ ಗೌರ್ ಹೇಳಿದ್ದಕ್ಕೆ ಪ್ರತಿಕ್ರಿಯೆಯೇ ಎಂಬಂತೆ ರಬೀಂದ್ರ ರೇ ಬರೆದಿದ್ದಾರೆ - ಎಲ್ಲವೂ ಮುಸುಕಿನೊಳಗೆ ಗುದ್ದಾಟ ನಡೆಸುವ ಹಾಗೆ ಕಾಣಿಸುತ್ತದೆಇಲ್ಲಿ ಶತ್ರು ಯಾರೆಂಬುದು ಸತ್ಯ ಸ್ಪಷ್ಟವಾಗಿದ್ದರೂಪ್ರಹಾರಮಾಡುವವ ಗಾಳಿಯಲ್ಲಿರುವ ಊಹಾವ್ಯಕ್ತಿಯಾಗಿದ್ದಾನೆ.

ಐವತ್ತು ವರ್ಷಗಳಿಂದಲೂ ನಡೆದು ಬಂದಿರುವ  ಯುದ್ಧವ್ಯವಸ್ಥೆಯ ವಿರುದ್ಧ ಕೇಂದ್ರೀಕೃತವಾಗದೇ ಪರಸ್ಪರ ಧೋರಣೆಗಳ ವಿರುದ್ಧದಯುದ್ಧವಾಗಿ ಕಡೆಗೆ ಗುಂಪು ಘರ್ಷಣೆಯ ಬೀದಿ ಜಗಳವಾಗಿ ಪರಿವರ್ತನೆಗೊಂಡಿದೆ.


ಆರು ವರ್ಷಗಳ ಹಿಂದೆಕರೀಂನಗರ ಜಿಲ್ಲೆ ರಾಯಕಲ್ ಗ್ರಾಮದಲ್ಲಿ ನಕ್ಸಲ್ ಚಟುವಟಿಕೆಯ ತರಂಗಗಳು ತಾಗಿದ್ದುವು.

ಅಂದು ರಾತ್ರೆ ಟೆಂಟಿನಲ್ಲಿ ರೋಷಗಾಡು ಸಿನೇಮಾ ನೋಡಿ ಸಹಕಾರ ಸಂಘದ ಕಾರ್ಯದರ್ಶಿ ಸುಭಾಷ್ ರಾಜುವಿನ ಮನೆಗೆಮರಳುತ್ತಿದ್ದಾಗ - ಮಫ್ತಿಯಲ್ಲಿದ್ದ ಪೋಲೀಸರು ನಮ್ಮನ್ನ ಹಿಡಿದರುಊರಿಗೆ ಹೊಸಬರಾಗಿಅದರಲ್ಲೂ ದಾದಾಗಳಂತೆ ಲುಂಗಿ ಧರಿಸಿಸಿನೇಮಾಕ್ಕೆ ಹೋದ ನಮ್ಮನ್ನು ಅವರು ನಕ್ಸಲ್ಗಳೆಂದು ಭಾವಿಸಿದ್ದು ಸಹಜವೇ ಇದ್ದೀತುಆಗ ನಮ್ಮ ಕೆಲಸಉದ್ದೇಶಗಳನ್ನಪೋಲೀಸರಿಗೆ ವಿವರಿಸುವುದು ಸ್ವಲ್ಪ ಕಷ್ಟವೇ ಆಯಿತುಅವರು ಕಡೆಗೂ ಸುಭಾಷ್ರಾಜುವಿನ ಮನೆಯವರೆಗೂ ಬಂದು ಅಲ್ಲಿ ನಮ್ಮ ಬಗ್ಗೆವಿಚಾರಣೆ ಮಾಡಿದ ನಂತರವೇ ನಮ್ಮನ್ನು ಬಿಟ್ಟುಕೊಟ್ಟಿದ್ದುಸದ್ಯಸುಭಾಷ್ರಾಜುವಿಗೆ ನಕ್ಸಲ್ ಸಂಬಂಧಗಳೇನೂ ಇರಲಿಲ್ಲ!

ಆದರೆ ಈಚೆಗೆ ತೆಲಂಗಾಣಾದಲ್ಲಿ ಸುತ್ತಾಡಿದಾಗ ಅನ್ನಿಸಿದ್ದುಈಗೀಗ ಅಷ್ಟು ಸರಳವಾಗಿ ಪೋಲೀಸರು ನಕ್ಸಲ್ಗಳ ಹಿಂದೆ ಬೀಳುವುದಿಲ್ಲ.ಇದಕ್ಕೆ ಕಾರಣಗಳೂ ಉಂಟುಒಂದು - ಮುಖ್ಯಮಂತ್ರಿ ಚೆನ್ನಾರೆಡ್ಡಿ ನಕ್ಸಲ್ಗಳ ಬಗ್ಗೆ ಸಡಿಲ ನೀತಿ ಅನುಸರಿಸುತ್ತಿದ್ದಾರೆಎರಡು -ನಕ್ಸಲ್ಗಳ ಬಳಿ ಇಂದು ಶಸ್ತ್ರಾಸ್ತ್ರಗಳ ಭಂಡಾರವೇ ಇದೆ ಎಂಬ ಪ್ರತೀತಿ ಲೇಖನದ ಪ್ರತಿ ತಯಾರಿಸುತ್ತಿದ್ದ ಸಮಯಕ್ಕೆ ನಕ್ಸಲ್ನಾಯಕಿ ಪದ್ಮಕ್ಕಳನ್ನು ಪೋಲೀಸರು ಎನ್ಕೌಂಟರ್ನಲ್ಲಿ ಕೊಂದು ಹಾಕಿದ್ದರುಕಾರಣಪದ್ಮಕ್ಕ ಮತ್ತು ಆಕೆಯ ಸಹಚರರು ಶಸ್ತ್ರಾಸ್ತ್ರಹಿಡಿದು ಓಡಾಡುತ್ತಿದ್ದರಂತೆಈಗಿನ ಮುಖ್ಯಮಂತ್ರಿ ಚಂದ್ರಬಾಬುವಿಗೂನಕ್ಸಲ್ ನಾಯಕರಿಗೂ ನಡುವೆ ಮಾತುಕತೆ ನಡೆಯುತ್ತಿದ್ದು - ಕಾರ್ಯಾಚರಣೆಯಿಂದ ಅದಕ್ಕೆ ಧಕ್ಕೆಯುಂಟಾಗಿದೆಹೀಗಾದರೂ ನಕ್ಸಲ್ಗಲು ತಮ್ಮ ಶಸ್ತ್ರಾಸ್ತ್ರ ಕೈಬಿಟ್ಟು ಶರಣಾಗುವರೆಂಬ ಸರಕಾರದಆಶಾವಾದ ನಕ್ಸಲ್ಗಳ ಸಂಪೂರ್ಣ ಕ್ರಾಂತಿಯ ಆಶಾವಾದದಂತೆಯೇ ಕಾಣುತ್ತದೆ.

ಹಾಗೆ ನೋಡಿದರೆತೆಲಂಗಾಣಾ ರೈತ ಚಳವಳಿ ವಿರಮಿಸಿದ ೧೯೫೬ರ ಪರಿಸ್ಥಿತಿಗೂಇಂದಿಗೂ ತುಂಬಾ ಸಾಮ್ಯವಿದೆಹಾಗೂ -ನಕ್ಸಲ್ಗಳು ಚರಿತ್ರೆಯಿಂದ ಪಾಠ ಕಲಿತಿದ್ದಾರೆನ್ನಿಸುತ್ತದೆ.

೧೯೫೬ರಲ್ಲಿ ಕಮ್ಯುನಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ಅಂದಿನ ಭಾರತ ಸರಕಾರ ಕಿತ್ತುಹಾಕಿದಾಗಭೂಗತ ಚಳವಳಿಗಾರರೆಲ್ಲಹೊರಬಂದು ಚಳವಳಿ ವಿರಮಿಸಿ ಪಾರ್ಲಮೆಂಟರಿ ಪದ್ಧತಿಯನ್ನು ಅನುಸರಿಸಲು ಒಪ್ಪಿ ಬಂದರುಬಸವಪುನ್ನಯ್ಯಪುಚ್ಚಲಪಲ್ಲಿಸುಂದರಯ್ಯಚಂಡ್ರರಾಜೇಶ್ವರರಾವು  ಎಲ್ಲರೂ ತೆಲಂಗಾಣಾ ಚಳವಳಿಯಲ್ಲಿ ಭಾಗವಹಿಸಿಕಡೆಗೆ ರಾಜಕೀಯ ಮುಖ್ಯವಾಹಿನಿಗೆಸೇರಿದವರು.

ಈಗಿತ್ತಲಾಗಿ ಚೆನ್ನಾರೆಡ್ಡಿ ಸರಕಾರ ಬಂದಮೇಲೆ - ಎನ್.ಟಿ.ಆರ್ ಅವರ ಎನ್ಕೌಂಟರ್ ನೀತಿ ಸಡಿಲಾದಂತಾಗಿಒಂದರ್ಥದಲ್ಲಿನಕ್ಸಲ್ಗಳ ಮೇಲಿದ್ದ ನಿಷೇಧ ತೆಗೆದಂತೆಯೇ ಆಗಿದೆ೧೯೫೬ರ ಪರಿಸ್ಥಿತಿ ಮರುಕಳಿಸುವುದಾದರೆಎಲ್ಲರೂ ರಾಜಕಾರಣದಮುಖ್ಯವಾಹಿನಿಯಲ್ಲಿ ಸೇರಿ - ಚುನಾವಣೆಗಳಲ್ಲಿ ಪಾಲ್ಗೊಳ್ಳಬೇಕುಹಾಗೇನಾದರೂ ಪಾಲ್ಗೊಂಡಲ್ಲಿ ಅವರು ಗೆದ್ದೇ ಗೆಲ್ಲುವರೆಂಬ ಮಾತನ್ನುಅಲ್ಲಿನ ಜನ ನಂಬಿದ್ದರು. (೨೦೦೨ನೇ ಇಸವಿಯಲ್ಲಿಅವರುಗಳಲ್ಲದೇ - ತೆಲಂಗಾಣಾ ರಾಷ್ಟ್ರ ಸಮಿತಿಯ ಚಂದ್ರಶೇಖರ ರಾವು ಕೂಡಾಬಂದು - ಮತ್ತೆ ಪ್ರತ್ಯೇಕ ತೆಲಂಗಾಣಾ ರಾಜ್ಯದ ಬಾವುಟವನ್ನ ಎತ್ತಿರುವುದರಿಂದ - ಕ್ರಾಂತಿ ಪ್ರಜಾಕೋರ್ಟುಗಳ ಹೊಸತನನಾಶವಾಗಿರುವುದರಿಂದ - ಏನಾಗುವುದೋ ತಿಳಿಯದ ಪರಿಸ್ಥಿತಿಯಲ್ಲಿದೆ.)

ಹಾಗೇನಾದರೂ ಮುಖ್ಯವಾಹಿನಿಗೆ ಬಂದರೆ ಅಧಿಕಾರ ಬರಬಹುದೆಂದು ಖಾತ್ರಿಯಿದ್ದರೂ - ಇಂಥಹ ರಾಜಕಾರಣದಲ್ಲಿ ಪಾಲ್ಗೊಳ್ಳುವುದುನಕ್ಸಲ್ ಸಿದ್ಧಾಂತಕ್ಕೇ ವಿರುದ್ಧವೇನೋ ಎನ್ನಿಸುವಂತಿದೆಎಷ್ಟಾದರೂ ಚೇರ್ಮನ್ ಮಾವೋ ಬಂದೂಕಿನ ನಳಿಗೆಯಿಂದ ಅಧಿಕಾರಬರುತ್ತದೆಂದು ಅಪ್ಪಣೆ ಕೊಡಿಸಿದ ಮೇಲೆಪ್ರಜಾಪ್ರಭುತ್ವ ಪದ್ಧತಿಯ ಬಗ್ಗೆ ತೆಲೆ ಕೆಡಿಸಿಕೊಳ್ಳಬೇಕಾದರೂ ಯಾಕೆ?

ಬದಲಿಗೆ:
ಪ್ರತಿಬಾರಿಯೂ ಎನ್ಕೌಂಟರುಗಳನ್ನು ಕಡಿಮೆಮಾಡಿಪರಸ್ಥಿತಿಯನ್ನು ಸಡಲಿಸಿದಾಗೆಲ್ಲಾನಕ್ಸಲ್ಗಳು ಶಸ್ತ್ರಾಸ್ತ್ರ ಖರೀದಿಗೆಇಳಿಯುವರೆಂದು ಸುದ್ದಿನಮಗೆ ಬಂದೂಕು ರಿವಾಲ್ವರ್ಗಳು ಪೋಲೀಸರಿಂದಲೇ ಬರುತ್ತದೆ - ಅಂದರೆ ಅವರಿಂದ ನಾವು ಅದನ್ನಕಿತ್ತುಕೊಳ್ಳುತ್ತೇವೆ. ಎಂದು ಗದ್ದರ್ ಹಿಂದೊಮ್ಮೆ ಹೇಳಿದಾಗ್ಯೂ ಹಳ್ಳಿಗಾಡಿನ ಜನ ಆಡಿಕೊಳ್ಳುವ ಮಾತೇ ಬೇರೆ - ಪೋಲೀಸರಬಳಿಇಂಥ ಆಧುನಿಕ ಶಸ್ತ್ರಾಸ್ತ್ರಗಳೆಲ್ಲಿಇದು ಪಂಜಾಬು ಕಶ್ಮೀರಗಳಿಂದ ಬಂದಿರುವ ಮಾಲೇ ಆಗಿರಬೇಕು.

ಅಂದು ತೆಲಂಗಾಣಾ ಚಳವಳಿಯ ಸಂದರ್ಭದಲ್ಲಿ:
ಭೂಮಿಯನ್ನು ಪ್ರಜಾಕೋರ್ಟಿನ ಮೂಲಕ ಜನ ತಮ್ಮಲ್ಲೇ ಹಂಚಿಕೊಂಡಿದ್ದರೆಂದು ಪ್ರತೀತಿಅದು ನಿಜವೂ ಹೌದುಆದರೆ ಅದುಅರ್ಧಸತ್ಯಮಾತ್ರಚಳವಳಿ ವಿರಮಿಸಿದ ನಂತರಜಮೀಂದಾರರು  ಭೂಮಿಯನ್ನು ಮರಳಿ ಪಡೆದರೆಂಬುದು ಜನಜನಿತಆದರಿಂದು -ಪ್ರಜಾಕೋರ್ಟಿನ ಮೂಲಕ ಮರುಹಂಚಿಕೆಯಾದ ಭೂಮಿಯನ್ನು ಬಂದೂಕಿನ ಬೆದರಿಕೆಯನ್ನಾದರೂ ಒಡ್ಡಿ ಮಂಡಲ ಕಾರ್ಯಾಲಯದಲ್ಲಿರೆಜಿಸ್ಟ್ರಿ ಮಾಡಿಸುತ್ತಿದ್ದಾರೆಎಂದೂ  ದೇಶದ ಕಾನೂನನ್ನು ಒಪ್ಪಿರದ  ಗುಂಪು ಇದ್ದಕ್ಕಿದ್ದಂತೆಅದರ ಪ್ರಯೋಜನವನ್ನಕಂಡುಕೊಂಡಿದೆ.

ಅದು ನಕ್ಸಲ್ಗಳ ನೇರ ಪ್ರಹಾರದ ಮಾತಾಯಿತುಅದಲ್ಲದೇ ಅಕ್ಕಪಕ್ಕದ ಹಳ್ಳಿಗಳಲ್ಲಿ ಹೆದರಿದ ಹಳೇ ಜಮೀಂದಾರರು ತಮ್ಮಭೂಮಿಯನ್ನ ಸಿಕ್ಕಷ್ಟು ಬೆಲೆಗೆ ಮಾರಾಟಮಾಡಿ ನಗರದತ್ತ ಪಲಾಯನ ಮಾಡುತ್ತಿದ್ದಾರೆನಕ್ಸಲ್ಬರಿಯ ತಾಯಿನಾಡಾದ ಪಶ್ಚಿಮಬಂಗಾಳದಲ್ಲಿ ಮುಖ್ಯವಾಹಿನಿಗೆ ಸೇರಿದ ಮಾರ್ಕ್ಸಿಸ್ಟರು ಅಧಿಕಾರ ಗಿಟ್ಟಿಸಿಕೊಂಡು ಕಾನೂನಿನ ರೀತ್ಯಾ ಮಾಡಿದ ಕೆಲಸವನ್ನ ಇಲ್ಲಿಬಂದೂಕು ಹಿಡಿದೇ ಸಾಧಿಸುವ ಹಠವನ್ನ ತೆಲಂಗಾಣಾದ ನಕ್ಸಲ್ಗಳು ಪ್ರದರ್ಶಿಸಿದ್ದಾರೆಆದರೂ ಕಡೆಗೆ ಅವರ ನೆರವಿಗೆ ಬರುತ್ತಿರುವುದುಕಾನೂನು ಕಾಯಿದೆಯೇ!!

ವಿವಿಧ ರಾಜಕೀಯ ಪಕ್ಷಗಳು ಒಂದೇ ದನಿಯಲ್ಲಿ ನಕ್ಸಲ್ಗಳನ್ನು ವಿರೋಧಿಸುವ ಭೂಮಿಕೆಯನ್ನ ನಿರ್ವಹಿಸುತ್ತಿರುವುದು ರಾಜಕಾರಣದಫಲವಾಗಿ ಅಲ್ಲದೇಕುಸಿಯುತ್ತಿರುವ ಕಾನೂನು ವ್ಯವಸ್ಥೆಯ ಅಂಶದಿಂದಾಗಿಕಾನೂನು ವ್ಯವಸ್ಥೆಯ  ರಾಜಕೀಯ ಆಯಾಮನಕ್ಸಲ್ಗಳಿಗೂ ಗೊತ್ತುಆದರೆ ಅವರಿಗೆ ಇದು -  ಕುಸಿತ - ಮೂಲಭೂತ ಪ್ರಶ್ನೆಯೇ ಅಲ್ಲಬದಲಿಗೆ ಅವರು  ಕಾನೂನು ವ್ಯವಸ್ಥೆಯಸ್ವರೂಪವನ್ನೇ ಪ್ರಶ್ನಿಸುತ್ತಾರೆಯೇ ಹೊರತು ತಮ್ಮಿಂದ ವ್ಯವಸ್ಥೆಗೆ ಭಂಗ ಬಂದಿದೆಯೆಂದು ಒಪ್ಪಲು ಅವರು ಸಿದ್ಧರಿಲ್ಲ.. ಎಂದು ರಬೀಂದ್ರರೇ ಹೇಳುತ್ತಾರೆ.

 ಪ್ರಜಾಕೋರ್ಟುಗಳುಪರ್ಯಾಯ ಕಾನೂನು ವ್ಯವಸ್ಥೆಯನ್ನು ಚೆನ್ನಾರೆಡ್ಡಿಯಂತಹ ಚೆನ್ನಾರೆಡ್ಡಿಯೂ ಗಮನಿಸಿ - ನಕ್ಸಲ್ ಜಿಲ್ಲೆಗಳಲ್ಲಿ -ಅಂದರೆ ಪ್ರಜಾಕೋರ್ಟುಗಳು ನಡೆಯುತ್ತಿರುವ ಜಿಲ್ಲೆಗಳಲ್ಲಿ ಸಂಚಾರಿ ನ್ಯಾಯಾಸ್ಥಾನಗಳನ್ನು ಒದಗಿಸುವುದಾಗಿ ಹೇಳಿದರುಅಂದರೇನು?ಯಾರಾದರೂ ವ್ಯವಸ್ಥೆಯನ್ನೇ ಧಿಕ್ಕರಿಸಿ ಶಸ್ತ್ರಾಸ್ತ್ರ ಕೈಗೆತ್ತಿಕೊಂಡಾಗ ಮಾತ್ರವೇ  ಪ್ರಾಂತದಲ್ಲಿ ಸುಧಾರಣೆ ಆಗುವುದೆಂದೇಇಡೀರಾಜ್ಯದಲ್ಲಿ ಶಕ್ತ ನ್ಯಾಯಾಂಗ ಇರಬೇಕೆಂದು ವ್ಯವಸ್ಥೆಗೆ ಅನ್ನಿಸುವುದಿಲ್ಲವೇಕೆಇದನ್ನ ಗಮನಿಸಿದರೆ ಅಡಗನಿದೇ ಅಮ್ಮ ಕೂಡಾಪೆಟ್ಟದು (ಕೇಳದಿದ್ದರೆ ತಾಯಿಯೂ ಉಣಿಸುವುದಿಲ್ಲಎಂಬ ತೆಲುಗು ಮಾತು ನೆನಪಿಗೆ ಬರುತ್ತದೆ. (ಚೆನ್ನಾರೆಡ್ಡಿಯ ಮಾತು ಆತನಕಾಲದಲ್ಲಲ್ಲದೇ ಈಗಿನ ಚಂದ್ರಬಾಬುವಿನವರಗೂ ನಿಜವಾಗಿಲ್ಲವಂಬುದು - ಆಡುವ ಮಾತಿಗೂ ಮಾಡುವ ಕೃತಿಗೂ ಇರುವ ಅಂತರವನ್ನಸೂಚಿಸುತ್ತದೇನೋ.)

ಶಸ್ತ್ರಾಸ್ತ್ರ ಚಳವಳಿ ಮಾಡುವವರಿಗೆ ಮಾವೋ ತ್ಸೆ ತುಂಗ ಗೆರಿಲ್ಲಾ ವಾರ್ಫೇರ್ ಮತ್ತು ಅದೇ ಹೆಸರಿನ ಚೆ ಗವೇರನ ಪುಸ್ತಕ ಆಧಾರಗ್ರಂಥಗಳಾಗಿವೆ ಪುಸ್ತಕಗಳಲ್ಲಿ ಕಾಡಿನಲ್ಲಿದ್ದು ರಾಜಕೀಯಕ್ಕಾಗಿ ಶಸ್ತ್ರಾಸ್ತ್ರ ಚಳವಳಿ ನಡಸುವುದಕ್ಕೂನಗರ ಪ್ರಾಂತದಲ್ಲಿದ್ದುನಡೆಸುವುದಕ್ಕೂ ಇರುವ ವ್ಯತ್ಯಾಸಅನುಕೂಲಅನಾನುಕೂಲಗಳನ್ನು ವಿವರವಾಗಿ ಚರ್ಚಿಸಲಾಗಿದೆಜನಬೆಂಬಲವನ್ನಒಂದಂಶದವರೆಗೂ ಪಡೆದ ನಕ್ಸಲ್ಗಳು ಅಡವಿಗಳ ಆದಿಲಾಬಾದ್ಕಾಡುಮೇಡಿನ ಮೆದಕ್ ಜಿಲ್ಲೆಗಳಲ್ಲೇ ಇದ್ದಾರೆಅಂದರೆ:ಕಾಡುಮೇಡಿಲ್ಲದ ಜಾಗದಲ್ಲಿ ಚಳವಳಿ ಬೇಡವೆಂದೇತೆಲಂಗಾಣಾ ರೈತ ಚಳವಳಿ ಉದ್ಭವಿಸಿದ ಕಲ್ಲುಬಂಡೆಗಳ ನಲ್ಲಗೊಂಡದಲ್ಲಿ ಏಕೆಸಂಘದವರು ಆದಿಲಾಬಾದಿನಷ್ಟು ಶಕ್ತರಾಗಿಲ್ಲ?

ಜನತಂತ್ರದ ಸಿದ್ಧಾಂತದಲ್ಲಿ ಸಂಪೂರ್ಣ ನಂಬಿಕೆ ಕಳೆದುಕೊಂಡುಅದನ್ನು ಬದಲಿಸಹೊರಡದೇಅದರ ಭಾಗವಾಗಿಯೂ ಉಳಿಯದೆಯೇಪರ್ಯಾಯ ಸರಕಾರವನ್ನೂಪರ್ಯಾಯ ನ್ಯಾಯವ್ಯವಸ್ಥೆಯನ್ನೂ ನಿರ್ಮಿಸುವಲ್ಲಿ ಒಂದಂಶದಮಟ್ಟಿಗೆ ಸಫಲರಾಗಿರುವ ನಕ್ಸಲ್ಗಳುತಾವೇ ಒಂದು ವ್ಯವಸ್ಥೆಯಾಗಿ ಕೆಲ ಮೂಲಭೂತ ಪ್ರಶ್ನೆಗಳನ್ನು ನಮ್ಮ ಮುಂದೊಡ್ಡುತ್ತಾರೆ.ಪ್ರಜಾತಂತ್ರದ ಎಲ್ಲ ಫಲಗಳನ್ನೂ ಅನುಭವಿಸುತ್ತಸ್ವಂತ ಹಣವನ್ನು ಸಮಸಮಾಜದ ನಿರ್ಮಾಣಕ್ಕಾಗಿ ಎಂದೂ ವ್ಯಯಮಾಡಲುಇಚ್ಛಿಸದನಕ್ಸಲ್ ಚಳವಳಿಯಂತಹ ಚಳವಳಿಗಳ ಬಗೆಗೆ ಚಕಿತನಾಗಿಇಂಥ ಚಳವಳಿಯ ಅವಶ್ಯಕತೆಯ ಬಗ್ಗೆ ಗಂಟೆಗಟ್ಟಲೆಮಾತಾಡಬಲ್ಲಅಂಥ ಚಳವಳಿಯೊಂದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಧೈರ್ಯವಿಲ್ಲದಚಿಟಿಕೆ ಹೊಡೆವಲ್ಲಿ ದೇಶದ ಯಾವುದೇಸಮಸ್ಯೆಗೆ ಪರಿಹಾರ ನೀಡುವಮೇಲಾಗಿ ಬಂಡವಾಳಶಾಹಿಗಳ ಕಾಶಿ ಎನ್ನಿಸಿಕೊಂಡ - ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನಲ್ಲಿಹಣಕಾಸುಲಾಭನಷ್ಟಗಳ ಬಗ್ಗೆ ವೈಭವದಿಂದ ಪಾಠಮಾಡುವಬಾಯಿಮಾತಿನ ಕ್ರಾಂತಿಕಾರಿಯಾದಚಿಲ್ಲರೆ ಬೂರ್ಜ್ವಾಬುದ್ಧಿಜೀವಿಯಾದ ನಾನು - ಮಧ್ಯಮ ವರ್ಗದ ಆರಾಮಕುರ್ಚಿಯ ಕ್ರಾಂತಿಯ ಕನಸನ್ನು ನನಸು ಮಾಡ ಹೊರಟಿರುವ  ನಕ್ಸಲ್ಗಳಕಾವ್ಯನ್ಯಾಯದ ನೀತಿಯನ್ನು ಪ್ರಶ್ನಿಸಲು ಯಾವುದೇ ಆಧಾರ ಇಲ್ಲದಾಗ್ಯೂ -  ಕೆಲಸವನ್ನ ಭಂಡತನದಿಂದ ಮಾಡ ಹೊರಟಿದ್ದೇನೆ.

 ಪುಸ್ತಕದಲ್ಲಿ ಟೀಕಿಸಿರುವ ಸಂಸ್ಥೆಗಳೇ ಇದರ ಬರವಣಿಗೆಗಾಗಿ ಆಹಾರ ಒದಗಿಸಿವೆಪ್ರತಿದಿನ ಮುಂಜಾನೆ ಅಮುಲ್ ಬೆಣ್ಣೆಚೀಸ್ಬಳಿದ ಸ್ಯಾಂಡ್ವಿಚ್ಗಳನ್ನು ಮೆಲ್ಲುತ್ತಭಾರತದ ಬಡಮಕ್ಕಳ ಆಹಾರ ಪೌಷ್ಠಿಕತೆಯ ಕೊರತೆಯ ಬಗ್ಗೆ ಬರೆಯುತ್ತಲೇ - ಕನಿಷ್ಠಪೌಷ್ಠಿಕತೆಗೆ ಅವಶ್ಯವಾದದನ್ನೂ ಮೀರಿ ಆಪರೇಷನ್ ಫ್ಲಡ್ ಹಾಲನ್ನು ಕುಡಿದಿದ್ದೇನೆಇದು ಪರಿಸ್ಥಿತಿಯ ವೃತ್ತಾಂಯಾರೆಲ್ಲಾಮಹಾಪೂರವನ್ನ ಶಪಿಸುವರೋಕುಡಿಯುವ ನೀರನ್ನು ಅಲ್ಲಿಂದಲೇ ಪಡೆಯವರು. ಎಂಬ ಶಾಂತಿ ಜಾರ್ಜ್ ವಾಕ್ಯಗಳನ್ನು ಓದಿದಾಗಟೀಕೆ ಟಿಪ್ಪಣಿ ಬರೆಯಲು ಧೈರ್ಯವೂ ಬರುವುದು.

ನಾವು ನಕ್ಸಲ್ಗಳ ಕಾರ್ಯಸ್ವರೂಪವನ್ನುಸಿದ್ಧಾಂತವನ್ನು ಎರಡು ನಲೆಗಳಲ್ಲಿ ಪ್ರಶ್ನಿಸಬಹುದು.

ಒಂದು:
ಸೈದ್ಧಾಂತಿಕವಾಗಿ ಹಿಂಸಾವಾದವನ್ನು ಪ್ರಚೋದಿಸುತ್ತಾರೆಂಬ ಅಂಶಕ್ಕೆ ಸಂಬಂಧಿಸಿದ್ದುವಿರುದ್ಧ ಧೃವಗಳಲ್ಲಿ ಆಲೋಚಿಸುವಪ್ರಸ್ತುತವ್ಯವಸ್ಥೆಯೊಂದಿಗೆ ಮೂಲಭೂತ ವ್ಯತ್ಯಾಸಗಳಿರುವ ನಕ್ಸಲ್ಗಳು ಭಯೋತ್ಪಾದಕರಿಗೆ ಹತ್ತಿರದವರಾಗುತ್ತಾರೆಅವರು ಎಷ್ಟೇ ಜನರ ಪ್ರೀತಿವಿಶ್ವಾಸ ಗಳಿಸಿದರೂನಿರಂತರ ಭೀತಿಯ ಆಳ್ವಿಕೆ ಮೂಲಭೂತವಾದಿಯಾಗುತ್ತದೆಹಾಗೂ ಅವರ ಪರ್ಯಾಯ ವ್ಯವಸ್ಥೆಯೇ ಒಂದುವ್ಯವಸ್ಥೆಯಾಗೂ ಪರಿವರ್ತನೆಗೊಳ್ಳುತ್ತದೆ. (ಉದಾಹರಣೆಗೆ ಕಮ್ಯುನಿಸ್ಟ್ ರಷ್ಯಾದ ಪ್ರೋತ್ಸಾಹದೊಂದಿಗೆ ರಾರಾಜಿಸಿದ ಆಫಘಾನಿಸ್ತಾನದನಜೀಬುಲ್ಲಾನಿಗೆ ವಿರುದ್ಧವಾಗಿ ಕ್ರಾಂತಿಯ ಮಾತುಗಳನ್ನೇ ಆಡುತ್ತ ಬಂದ ಹೋರಾಟಗಾರರು ಯಾರುಬೇರಾರೂ ಅಲ್ಲ - ತಾಲಿಬಾನ್.ಹೀಗಾಗಿ ಈಗಿರುವ ರೋಗಕ್ಕೆ ಕೊಡಬೇಕಾದ ಮದ್ದಿನ ಸೈಡ್ ಎಫೆಕ್ಟ್ ಏನೆಂಬುದನ್ನು ಯೋಚಿಸಬೇಕೇನೋಮದ್ದೇ ಮತ್ತೊಂದುರೋಗವಾಗಿ ಪರಿವರ್ತಿತಗೊಳ್ಳದಂತೆ ನೋಡಿಕೊಳ್ಳುವುದು ಹೇಗೆ?)

ಎರಡು:
ನಕ್ಸಲ್ಗಳ ಸಿದ್ಧಾಂತವೇ ಸರ್ವಶೂನ್ಯವಾದಕ್ಕೆ (nihilismಸಮೀಪದ್ದು ಎಂಬ ಟೀಕೆ೧೭೯೧ರಲ್ಲಿ ಸರ್ವಶೂನ್ಯವಾದ ಎಂಬ ಪದ ಬಳಕೆಗೆಬಂದಾಗ ಅದನ್ನು ಒಂದು ಗುರಿಯಿಲ್ಲದಒಂದು ಸ್ಪಷ್ಟ ದಿಕ್ಕಿನತ್ತ ಸಾಗದಿರುವ ಕ್ರಾಂತಿಕಾರಿ ಎಂಬರ್ಥದಲ್ಲಿ ಬಳಕೆಯಾಯಿತುಆದರೆನೀತ್ಸೆಯ ಸಮಯಕ್ಕೆ ಅವನು ಅದರ ಅರ್ಥವನ್ನು ಮೂಲಭೂತ ನಾಸ್ತಿಕತೆ ಎಂಬರ್ಥದಲ್ಲಿ ಬಳಸಿದನಕ್ಸಲ್ಗಳ ಗುರಿ ಮತ್ತು ಗದ್ದರ್ಮೂಲಕ ಬಂದಿರುವ ಹುಸಿ ಜನತಂತ್ರದಲ್ಲಿ ಖೋಟಾ ಚುನಾವಣಾ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲನೂತನ ಪ್ರಜಾಸತ್ತಾತ್ಮಕಕ್ರಾಂತಿ ನಮ್ಮ ಗುರಿ ಎಂಬ ಮಾತುಗಳು ೧೭೯೧ರ ಸರ್ವಶೂನ್ಯವಾದಿಗಳ ವ್ಯಾಪ್ತಿಯಲ್ಲಿ ನಕ್ಸಲ್ಗಳನ್ನು ತೂರಿಸಿಬಿಡುತ್ತದೆ.

ನಕ್ಸಲ್ಗಳ ಅವಫಲತೆ ಇರುವುದು  ಪ್ರಪಂಚವನ್ನು ಅರ್ಥೈಸುವಲ್ಲಿ ಅವರು ಮಾಡಿರುವ ಮೂಲಭೂತ ತಪ್ಪಿನಲ್ಲಿದೆಹಾಗೂ ಇಂಥಅರ್ಥೈಸುವಿಕೆಯಿಂದ ಹೊಮ್ಮಿಬಂದಿರುವ ತಪ್ಪಾದ ಕಾರ್ಯರೂಪದಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಎಂದು ಬಿಪ್ಲಬ್ ದಾಸ್ಗುಪ್ತಾಹೇಳುತ್ತಾರೆನಕ್ಸಲ್ಗಳು ಪರ್ಯಾಯ ವ್ಯವಸ್ಥೆಯೊಂದನ್ನು ಕೊಡಬಲ್ಲರೇ ಇಲ್ಲವೇ ಎಂಬುದು ಪ್ರಶ್ನೆಯೇ ಅಲ್ಲಅವರು ಅಂಥವ್ಯವಸ್ಥೆಯನ್ನು ಕೊಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ನಿರೂಪಿಸಿಬಿಟ್ಟಿದ್ದಾರೆಆದರೆ ಅಂಥ ವ್ಯವಸ್ಥೆಯನ್ನ ನೀಡಬಲ್ಲೆವೆಂಬ ಭಾವನೆಅವರಲ್ಲಿ ಇರುವುದಂತೂ ನಿಜ ಎಂದು ರಬೀಂದ್ರ ರೇ ಹೇಳುತ್ತಾರೆ.

ಮೇಲಿನ ಸೈದ್ಧಾಂತಿಕ ಕಾರಣಗಳು ಒಂದೆಡೆಯಾದರೆ -
ದಿನದಿನಕ್ಕೆ ತಮ್ಮಲ್ಲಿನ ಸೈದ್ಧಾಂತಿಕ ಮತ್ತು ಒಮ್ಮೊಮ್ಮೆ ಖಾಸಗೀ ಕಾರಣಗಳಿಗಾಗಿಪಂಥವಾಗಿಗುಂಪಾಗಿಹೋಳಾಗಿಹಾಳಾಗಿಹೋಗುತ್ತಿರುವ ನಕ್ಸಲ್ಗಳು ನಮ್ಮಲ್ಲಿ ಆಶಾವಾದವನ್ನೇನೂ ಉದ್ದೀಪಿಸುವುದಿಲ್ಲ೧೯೮೫ರಲ್ಲಿ ಪ್ರಕಾಶ್ ಕರಾತ್ ನಡೆಸಿದ ಒಂದುಅಧ್ಯಯನದ ಪ್ರಕಾರ ನಕ್ಸಲ್ಗಳಲ್ಲಿ ೧೫ ಪುಟ್ಟ ಗುಂಪುಗಳೂ ದೊಡ್ಡ ಗುಂಪುಗಳೂ ಇದ್ದುವುಅವುಗಳಲ್ಲಿ ತೆಲಂಗಾಣದಲ್ಲೇ  ದೊಡ್ಡ, ಪುಟ್ಟ ಗುಂಪುಗಳು  ನಕ್ಸಲ್ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದುವೆಂದರೆಒಂದೊಂದು ಗುಂಪೂ ಎಷ್ಟು ಗ್ರಾಮಗಳಪಾಳೇಗಾರಿಕೆ ಮಾಡುತ್ತಿದ್ದಿರಬಹುದೆಂದು ಲೆಕ್ಕ ಹಾಕಬಹುದುಅವುಗಳೂ ಕೂಡದಳಗಳಾಗಿ ಹಂಚಿಹೋಗಿ ತಮ್ಮ ಇಲಾಖೆಗಳನ್ನುಸ್ಪಷ್ಟವಾಗಿ ಹಂಚಿಕೊಂಡು  ಪ್ರಕಾರವಾಗಿ ಅನಧಿಕಾರ (ಅನಧಿಕೃತವಾಗಿ ಅಧಿಕಾg) ಚಲಾಯಿಸುತ್ತಿದ್ದಾರೆ.

ಜೀವ ತೆಗೆಯುವುದೇ ಸರಳೋಪಾಯ ಎನ್ನಿಸಿದವರಿಗೆ ಶತ್ರುಗಳನ್ನು ನಾಮಾವಶೇಷ ಮಾಡುವುದು ಸರಳವಾಗುವುದುವರ್ಗ ಶತ್ರುಗಳಜೀವ ತೆಗೆಯುವುದೊಂದುಕಡೆಯಾದರೆ - ಅಂಥದೇ ಶತ್ರುವಿನ ವಿರುದ್ಧ ಕತ್ತಿ ಎತ್ತಿರುವ ಸೈದ್ಧಾಂತಿಕ ಶತ್ರುವಿನ ಜೀವ ತೆಗೆಯುವುದುಬೇರೆಯೇ ವಿಚಾರವಾಗುತ್ತದೆಇದೇ ಸರಳೋಪಾಯವಾಗಿ ಮುಂದುವರೆದು ಒಂದು ವ್ಯಸನವಾಗುವ ಮಾತು ದೂರದ್ದೇನೂ ಅಲ್ಲ.

 ಎಲ್ಲದರ ಮಧ್ಯೆ ನಕ್ಸಲ್ಗಳ ಹೆಸರಿನಲ್ಲಿ ದಾರಿಹೋಕರನ್ನು ದರೋಡೆ ಮಾಡುವವರೂನಕ್ಸಲ್ ಕಥೆಗಳನ್ನು ತಮ್ಮದಾಗಿಸಿಕೊಂಡುಸಿನೇಮಾ ಮಾಡುವವರೂ ಬೇರೆ ರೀತಿಯಲ್ಲಿ ಜನರನ್ನ ಮನರಂಜಿಸಿ ದೋಚಿ ತಮ್ಮ ಕಾರ್ಯಸಾಧಿಸಿಕೊಳ್ಳುತ್ತಾರೆ. (ಅಂಥಸಿನೇಮಾವೊಂದಕ್ಕೆ ಕ್ರಾಂತಿಕಾರಿ ಗದ್ದರ್ ಕಂಠದಾನ ಮಾಡಿಹಾಡುಗಳನ್ನ ಹಾಡಿದ - ಅದೇಕಾರಣವಾಗಿ ಪಿ.ಡಬ್ಲು.ಜಿ ಯಿಂದಬಹಿಷ್ಕೃತಗೊಂಡದ್ದುನಂತರ ಮಾಫಿ ಆದರೂ ಆತ ವಾಪಸ್ಸಾಗದಿದ್ದದ್ದುಈಚೆಗೆ ಅವರ ಪರವಾಗಿ ಸರಕಾರದೊಂದಿಗೆ ಶಾಂತಿಯಮಾತುಕತೆ ನಡೆಸುತ್ತಿರುವುದು...  ಎಲ್ಲವೂ ಗೊಂದಲಮಯ ವಿಪರ್ಯಾಸವಾಗಿ ಕಾಣಿಸುತ್ತದೆ.)

ತಮ್ಮತಮ್ಮಲ್ಲೇ ಇರುವ ಮಾರ್ಕ್ಸಿಸ್ಟ್-ಲೆನಿನಿಸ್ಟ್-ಮಾವೋಯಿಸ್ಟ್ ಸಿದ್ಧಾಂತಕ್ಕೆ ಹಲವು ಮಾರ್ಗಗಳನ್ನ ಹಲವು ಪಂಥಗಳಹಲುವುಗುಂಪುಗಳ ಮೂಲಕ ಕಂಡುಕೊಂಡಿರುವ ನಕ್ಸಲ್ಗಳು ಒಂದೇ ಮಾರ್ಗದಲ್ಲಿ ನಡೆಯದಿದ್ದರೆ ಅವರ ಹಾದಿ ಕಡಿದಾಗುತ್ತದೆಂದು ಚರಿತ್ರೆಅವರಿಗೆ ತಿಳಿಸಿದೆಹಾಗೂ ಅವರ ರಕ್ಷಣೆಗೆ ಕಾಳೀ ಮಾ ಳೇ ಇಳಿದು ಬರಬೇಕಾಗುತ್ತದೆ.

ಹಾಗೂ:
 ಸರ್ವಶೂನ್ಯವಾದಿಗಳು - ಅಂದರೆ ಮೂಲಭೂತ ನಾಸ್ತಿಕರು - ಕಾಳೀಮಾಳ ಸೆರಗಿನಡಿಯಲ್ಲಿ ಮಾವೋ ತೊ ನಕ್ಸಲ್ ಎಂಬಬೀಜಮಂತ್ರ ಜಪಿಸುತ್ತಾರಕ್ತಕ್ರಾಂತಿಯ ಮಾತುಗಳನ್ನಾಡುತ್ತಾ ಒಂದೆರಡು ಕುರಿಗಳನ್ನು ಮಾ ಗಾಗಿ ಬಲಿದಾನ ಮಾಡಿಆದಿಲಾಬಾದಿನಅಡವಿಯಲ್ಲಿ ಪೋಲೀಸರ ಗುರಿಯಾಗಿಜನರ ಭೀತಿಯಾಗಿಆಶಾವಾದವಾಗಿನಿರಾಶಾವಾದವಾಗಿಏನೆಲ್ಲಾ ಆಗಿಯೂ ಏನೂ ಆಗದೇಉಳಿಯಬೇಕಾಗುತ್ತದೆ.ಆರು ವರ್ಷಗಳ ಹಿಂದೆ ಹೈದರಾಬಾದ್ನಗರ ಹೊಕ್ಕಾಗಮೊದಲ ಬಾರಿಗೆ ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಮಾವೋ ತ್ಸೆ ತುಂಗನವೇದವಾಕ್ಯ "Power comes out of the barrel of a gun'ಗೋಡೆ ಗೋಡೆಯ ಮೇಲೆ ಕಂಡಿದ್ದೆಅಂದು  ಪದಗಳುಅರ್ಥವಾಗಿರಲಿಲ್ಲಆರು ವರ್ಷಗಳ ಕಾಲ ನಕ್ಸಲ್ ಚಳವಳಿಯನ್ನ ಹೊರಗಿನವನಾಗಿ ಗಮನಿಸಿದೆಇಂದೂ  ಪದಗಳು ನನಗೆ ಇನ್ನೂಅರ್ಥವಾಗುತ್ತಿಲ್ಲ.

ನವಂಬರ್೧೯೯೦.
No comments:

Post a Comment